Saturday, November 4, 2023

ಕಟ್ಟಡ ಕಾರ್ಮಿಕರ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ - 2023-24

 ವಿದ್ಯಾರ್ಥಿಗಳಿಗೆ 40,000 ರೂ.ಗಳ ವರೆಗೆ ಪ್ರೋತ್ಸಾಹ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ- 2023-24 


ನಮಸ್ತೆ ಸ್ನೇಹಿತರೆ, ಇಂದು ಕಟ್ಟಡ ಕಾರ್ಮಿಕ ಪ್ರೋತ್ಸಾಹ ಧನಸಹಾಯದ ಬಗ್ಗೆ ತಿಳಿಯೋಣ. 

ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ  ಭವಿಷ್ಯದ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದು ವಿದ್ಯಾರ್ಥಿಗಳ ಓದಿಗೆ ನೆರವಾಗುವ ನಿಟ್ಟಿನಲ್ಲಿ ಈ ಸ್ಕಾಲರ್ಶಿಪ್ ಅನ್ನು ಜಾರಿಗೆ ತಂದಿದೆ.







ಈ ಸ್ಕಾಲರ್ಶಿಪ್ಗೆ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯನ್ನು ಯಾರ್ಯಾರು ಪಡೆಯಬಹುದು? ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು? ಎಷ್ಟು ಪ್ರೋತ್ಸಾಹ ಧನಸಹಾಯ ಸಿಗುತ್ತದೆ?ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗು ನೀವು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದೀರಾ? ಎಂಬುದನ್ನು ತಿಳಿದುಕೊಳ್ಳಿ.







ಪ್ರೋತ್ಸಾಹ ಧನ - 8,000 ರೂ.ಗಳಿಂದ 40,000 ರೂಂ.ಗಳ ವರೆಗೆ.

ಯಾರು ಅರ್ಹರು :-

ಪ್ರೌಢ ಶಾಲೆಯಲ್ಲಿ ಓದುತ್ತಿರುವವರು, ಪಿಯುಸಿ,‌ ಡಿಪ್ಲೋಮಾ, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು.

ನಿಯಮಗಳು :-

ಕಾರ್ಮಿಕರ ಮಾಸಿಕ ವೇತನ 35,000 ರೂ. ಮೀರಿರಬಾರದು.

ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ಸಿಗುತ್ತದೆ.





ಅರ್ಜಿ ಸಲ್ಲಿಸುವ ವಿಧಾನ :-  ಆನ್ಲೈನ್  

ಅರ್ಹತೆಗಳು :-

ಕಾರ್ಮಿಕ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯು 50% ಅಂಕ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು 40% ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.

ಧನ ಸಹಾಯದ ವಿವರ :- 

ವಿವಿಧ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಮೊತ್ತವನ್ನು ನೀಡಲಾಗುತ್ತದೆ.

 8 ರಿಂದ 10ನೇ ತರಗತಿ - 8,000- 10,000

ಪಿಯುಸಿ,‌ ಡಿಪ್ಲೋಮಾ, ಐಟಿಐ, ಟಿಸಿಹೆಚ್ - 15,000

ಪದವಿ - 20,000

ಸ್ನಾತಕೋತ್ತರ ಪದವಿ - 30,000

ಇಂಜಿನಿಯರಿಂಗ್, ವೈದ್ಯಕೀಯ - 40,000






ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31/01/2024

ಅಧಿಕೃತ ವೆಬ್ಸೈಟ್:- 

klwb.karnataka.gov.in 


No comments:

Post a Comment

If you have any doubts, please let me know

"Emergency Response: The Importance of Timely Care for Heart Attacks"

  Experiencing Sudden Chest Pain? It Could Be More Than Gas - Expert Shares Signs Of A Heart Attack Sudden chest pain can be a frightening e...