Friday, November 3, 2023

Airport Authority of India(AAI) Job Vecancy-2023

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ - 2023 ರ ಜಾಬ್ ವೇಕೆನ್ಸಿ. 

AAI ಹುದ್ದೆಗಳಿಗೆ ನೇಮಕಾತಿ ಆರಂಭ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ತಿಳಿಸಲಾಗಿದೆ.


AAI ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉದ್ಯೋಗವನ್ನು ಅರಸುತ್ತಿರುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.






AAI ಯು ಸುಮಾರು 496 ಜೂನಿಯರ್ ಎಕ್ಸ್ಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಆನ್ಲೈನ್ ಅರ್ಜಿಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಇಂದಿನಿಂದ ನವೆಂಬರ್ ತಿಂಗಳ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.‌ ಈ ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ನೇಮಕಾತಿಯ ವಿಧಾನ :-

ಲಿಖಿತ ಮಾದರಿಯ ಆನ್ಲೈನ್  ಪರೀಕ್ಷೆ ನಡೆಯಲಿದೆ. ಅಬ್ಜೆಕ್ಟಿವ್ ಮಾದರಿಯಲ್ಲಿ.

AAI ಹುದ್ದೆಗಳ ಸಂಖ್ಯೆ :-

496 ಹುದ್ದೆಗಳು

ಹುದ್ದೆಗಳ ವೇತನ ಶ್ರೇಣಿ :-

40,000 ರೂ.ಗಳಿಂದ1,40,000 ರೂ.ಗಳ ವರೆಗೆ





ಶೈಕ್ಷಣಿಕ ಅರ್ಹತೆಗಳು ಮತ್ತು ವಯೋಮಿತಿ:-

ಭೌತಶಾಸ್ತ್ರ ವಿಷಯದಲ್ಲಿ ಬಿ ಎಸ್ಸಿ,  ಸೈನ್ಸ್ ಅಥವಾ ಗಣಿತ ಅಥವಾ ಭೌತಶಾಸ್ತ್ರ ವಿಷಯ ಸಹಿತ ಬಿಇ ಪದವಿ ಪಡೆದಿರಬೇಕು.

ಗರಿಷ್ಠ 27 ವರ್ಷ ಮೀರಿರಬಾರದು.  ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ, ಎಸ್ಸಿ, ಎಸ್ಟಿ, ‌ಪಿಡಬ್ಲ್ಯೂಡಿ ವರ್ಗದವರಿಗೆ 32 ವರ್ಷ.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 01/11/2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-30/11/2023

ಶುಲ್ಕ ಪಾವತಿಗೆ ಕೊನೆಯ ದಿನಾಂಕ:- 30/11/2023







ಸಾಮಾನ್ಯ ಕೆಟಗರಿ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000/-

ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು.

ಕಂಪ್ಯೂಟರ್ ಆಧಾರಿತ ಸಂಭಾವ್ಯ ಪರೀಕ್ಷೆಯ ದಿನಾಂಕವನ್ನು  ಎಎಐ ವೆಬ್ಸೈಟ್ ನಲ್ಲಿ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.

ಅಧಿಕೃತ ವೆಬ್ಸೈಟ್ :- www.aai.aero



No comments:

Post a Comment

If you have any doubts, please let me know

Celebrating World Pharmacists Day

  Celebrating World Pharmacists Day: The Essential Role of Pharmacists in Healthcare World Pharmacists Day, observed annually on September 2...